Thursday, December 21, 2023

Bhagyavantaru - Ninna Nanna Manavu Seritu (ನಿನ್ನ ನನ್ನ ಮನವು ಸೇರಿತು)

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೆ  ಭಾವವು ಒಂದೆ, ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

ಏಕಾಂಗಿಯಾಗಿರಲು ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ, ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶೃತಿಯಾದೆ,
ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

ಎಂದೂ ಜೊತೆಯಲಿ ಬರುವೆ, ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು, ಮರುಗದಿರು, ಹಾಯಾಗಿ ನೀನಿರು.
ಎಂದೂ ಜೊತೆಯಲಿ ಬರುವೆ, ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ, ಆನಂದ ನಿನದಾಗಲಿ.
ನಗುವಿನ ಹೂಗಳ ಮೇಲೆ, ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ.

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

No comments:

Post a Comment