Thursday, December 21, 2023

Bhagyavantaru - Ninna Nanna Manavu Seritu (ನಿನ್ನ ನನ್ನ ಮನವು ಸೇರಿತು)

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೆ  ಭಾವವು ಒಂದೆ, ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

ಏಕಾಂಗಿಯಾಗಿರಲು ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ, ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶೃತಿಯಾದೆ,
ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

ಎಂದೂ ಜೊತೆಯಲಿ ಬರುವೆ, ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು, ಮರುಗದಿರು, ಹಾಯಾಗಿ ನೀನಿರು.
ಎಂದೂ ಜೊತೆಯಲಿ ಬರುವೆ, ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ, ಆನಂದ ನಿನದಾಗಲಿ.
ನಗುವಿನ ಹೂಗಳ ಮೇಲೆ, ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ.

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು.

Saturday, July 29, 2023

Nagarahole - Ille Swarga Ille Naraka (ಇಲ್ಲೇ ಸ್ವರ್ಗ ಇಲ್ಲೇ ನರಕ)

ಆ ಅಹಾ..  ಆಹಆಹ  ಹಹಹಾ

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಏ ಮೂರು ದಿನದ ಬಾಳು

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಏ ಮೂರು ದಿನದ ಬಾಳು

ಕಪ್ಪು ಬಿಳುಪು ಬಣ್ಣ ಹೇಗೊ ಹಗಲು ರಾತ್ರಿ ಹಾಗೆ
ನಗುವು ಅಳುವು ಎರಡೂ ಉಂಟು ಬೇಡ ಅಂದ್ರೆ ಹೇಗೆ
ಬಂದಾಗ ನಗುವೆ ಹೋದಾಗ ಮಾತ್ರ ಕಣ್ಣೀರೇಕೊ ಕಾಣೆ
ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನ್ಗೇನೆ ತಾನೆ

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಏ ಮೂರು ದಿನದ ಬಾಳು

ಬಿಸಿಲಿಗೆ ಕರಗೋ ಮಂಜೇನಲ್ಲ ಕಷ್ಟ ನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ
ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ ಹೋದ್ರೆ ತಾನೆ ದಾರಿ ಕಾಣೋದ್ ನಮ್ಗೆ

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಏ ಮೂರು ದಿನದ ಬಾಳು
ಹೋ ಮೂರು ದಿನದ ಬಾಳು