Wednesday, January 1, 2014

Vijayavani Madhumasa chandrama (ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ)

ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್ ಜಾನಕಿ ಮತ್ತು ವಾಣಿ ಜಯರಾಂ

ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ (೨)
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ (೨)
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ

ನಾ ಪ್ರೇಮದರಮನೆಯಲ್ಲಿ, ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ

ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ
ಅಲೆಅಲೆಯಲಿ ತೇಲಿ ತೇಲಿದೆ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ  (೨)

ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ
ಹಾಯಾಗಿ ತೂಗಿ ತೂಗುವೆ

ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ (೨)
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ ..

3 comments: