Sunday, December 29, 2013

Nagarahavu - Havina Dwesha Hanneradu Varusha (ಹಾವಿನ ದ್ವೇಷ ಹನ್ನೆರಡು ವರುಷ)

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಈ ಅಂಜದ ಎದೆಯಲಿ ನಂಜೇ ಇಲ್ಲ
ಬಗ್ಗುವ ಆಳಲ್ಲಾ, ತಲೆ ತಗ್ಗಿಸಿ ಬಾಳೊಲ್ಲಾ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲಾ
ಆದರೆ ಸೇಡನು ಬಿಡಲಿಲ್ಲಾ
ಅಭಿಮಾನವ  ಬಿಡಲೊಲ್ಲೇ, ಅಪಮಾನವ ಸಹಿಸೊಲ್ಲೇ
ಅನ್ಯಾಯವ ಮಾಡೊಲ್ಲೇ, ಹಾ

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗು ದೂರೋದಿಲ್ಲ, ನಂಬಿಕೆ ನೀಗೊಲ್ಲಾ
ನಾ ದಾರಿ ತಪ್ಪೊಲ್ಲಾ
ನಾ ಇಟ್ಟರೆ ಶಾಪ, ಕೊಟ್ಟರೆ ವರ ನೀತಿಯ ಮೀರೋಲ್ಲಾ
ನಾ ಒಲಿದರೆ ಕೇಡಿಲ್ಲಾ
ಆಕ್ರೋಶದ ಉರಿ ನಾನು, ಆವೇಗದ ವಶ ನಾನು
ಆ ಪ್ರೇಮಕೆ ಒಲಿದೇನು, ಹ ಹ ಹಹ್ಹ

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯು ಎಂದು ತಪ್ಪಿಲ್ಲಾ
ಎಂದೆಂದೂ ತಪ್ಪಿಲ್ಲಾ
ಈ ರಾಮಾಚಾರಿನ್ ಕೆಣಕೊ ಗಂಡು ಇನ್ನು ಹುಟ್ಟಿಲ್ಲಾ, ಹ ಹ ಹಹ್ಹ
ಆ ಗಂಡೆ ಹುಟ್ಟಿಲ್ಲಾ
ಆ ಭೀಮನ ಬಲದವನು, ಚಾಣಿಕ್ಯನ ಛಲದವನು
ಈ ದುರ್ಗದ ಹುಲಿ ಇವನೂ, ಹಾ

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

Katha Sangama - O Dyavre (ಓ ದ್ಯಾವ್ರೇ)

ಓ ದ್ಯಾವ್ರೇ, ಓ ದ್ಯಾವ್ರೇ 
ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ
ಓ ದ್ಯಾವ್ರೇ

ಏ ಹೂವೆ ನಿನ್ನ ಚೆಲುವ ನಾ ಕಂಡೆ ಇಲ್ಲಾ
ಚೆಲುವು ರೂಪು ಅಂದರೆನೊ ನಂಗೆ ಗೊತ್ತೇ ಇಲ್ಲಾ
ನಿನ್ನ ಗಮ ಗಮ ನನ್ನ ಮನವ ತುಂಬೈತಲ್ಲಾ, ತುಂಬೈತಲ್ಲಾ
ಓ ದ್ಯಾವ್ರೇ, ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ

ಓ ವೊಳೆಯೆ (ಹೊಳೆಯೇ) ನಿನ್ನ ಓಟ ನಾ ನೋಡಲಾರೆ
ಓ ಅಲೆಯೇ ನಿನ್ನ ಆಟ ನಾ ಕಾಣಲಾರೆ
ನಿನ್ನ ಸಂಗ ಆಡುವಾಗ ನನ್ನ ನಾ ಮರೆವೇ, ನನ್ನ ನಾ ಮರೆವೇ 
ಓ ದ್ಯಾವ್ರೇ, ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ

ಓ ಮುಗಿಲೇ ನಿನ್ನ ಬಣ್ಣ ನಾನೆಂದೂ ಕಾಣೆ
ಏಳು ಬಣ್ಣ ಅಂತಾರೆ ನಾನೊಂದು ಕಾಣೆ
ಸೋನೆಯಲ್ಲಿ ತೋಯುವಾಗ ನನ್ನ ನಾ ಮರೆವೇ, ನನ್ನ ನಾ ಮರೆವೇ
ಓ ದ್ಯಾವ್ರೇ, ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ, ಕುಣಿವೆ ನಿನ್ನಾಣೆ, ಕುಣಿವೆ ನಿನ್ನಾಣೆ